ಪೊಟ್ಯಾಶ್.ಲೆಸಿನ.ಮತ್ತು ಅಮಿನೊ ಆಮ್ಮಗಳು ಹೇರಳವಾಗಿರುತ್ತದೆ.ಜೊತೆಗೆ ಇದೊಂದು ದ್ವಿದಳ ದಾನ್ಯವಾದ್ದರಿಂದ ಇದು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ
ಸಾಮಾನ್ಯವಾಗಿ ಬಟಾಣಿ ಬೆಳೆಗೆ ಮಣ್ಣಿನ ರಸಸಾರ 5.5 ಇಂದ 7.5 ರ ವರೆಗಿನ ಮಣ್ಣಿನಲ್ಲಿ ಚೆನ್ನಾಗಿ ಬರುತ್ತದೆ.ಇದೊಂದು ಚಳಿಗಾಲದ ಬೆಳೆಯಾಗಿದ್ದು ಹೆಚ್ಚಿನ ಉಷ್ಣಾಂಶದಲ್ಲಿ ಇಳುವರಿ ಕಡಿಮೆಯಾಗುತ್ತದೆ.ಸಾಮಾನ್ಯವಾಗಿ ಎಲ್ಲಾ ವಿಧದ ಮಣ್ಣುಗಳಲ್ಲಿ ಬೆಳೆಯ ಬಹುದಾದರೂ ಮರಳು ಮಿಶ್ರಿತ ಕೆಂಪು.ಮರಳು ಮಿಶ್ರಿತ ಕಪ್ಪುಮಣ್ಣು ಸೂಕ್ತವಾದದ್ದು.
ಬಿತ್ತನೆ ಕಾಲ :
ಮಳೆಗಾಲದ ಬೆಳೆಯಾಗಿ ಜೂನ್ - ಜುಲೈನಲ್ಲಿ. ಮತ್ತು ಚಳಿಗಾಲದ ಬೆಳೆಯಾಗಿ ಅಕ್ಟೋಬರ್ - ನವೆಂಬರ್ ನಲ್ಲಿ ಬಿತ್ತನೆ ಮಾಡಬಹುದು.
- ಬೆಂಡೆಕಾಯಿ ಬೆಳೆ ಮಾಹಿತಿಗೆ ಈ ಲಿಂಕ್ ಬಳಸಿ
- ಬೆಂಡೆಕಾಯಿ ಬೆಳೆ ಮಾಹಿತಿ
ಬಟಾಣಿ ತಳಿಗಳು :
ಅರ್ಕಾ ಪ್ರಿಯಾ.ಬೆಂಗಳೂರು ಲೋಕಲ್.ಆರ್ಶೆಲ್.ಅರ್ಕಾ ಅಜಿತ್.ಅರ್ಕಾ ಸಂಪೂರ್ಣ.ಅರ್ಕಾ ಪ್ರಮೋದ್.ಅರ್ಲಿ ಬ್ಯಾಡ್ಜರ್.ಬೊನ್ನೆ ವಿಲ್ಲೆ.ಬಿ ಆರ್ 2. ಬಿ ಆರ್ 12. ಎನ್ ಪಿ 29.ಇನ್ನು ಮುಂತಾದವು.
ಬಟಾಣಿ ಬಿತ್ತನೆ ಪದ್ದತಿ :
ಭೂಮಿಯನ್ನು ಹದಮಾಡಿದ ನಂತರ 60 ಸೆಂ ಮಿ ಅಂತರದಲ್ಲಿ ಎತ್ತರಕ್ಕೆ ಮಣ್ಣು ಬರುವಂತೆ ಸಾಲುಗಳನ್ನು ಮಾಡಿ ಕೊಟ್ಟಿಗೆ ಗೊಬ್ಬರದ ಜೊತೆ 30 ಕೆ ಜಿ ಸಾರಜನಕ.50 ಕೆ ಜಿ ರಂಜಕ.50 ಕೆ ಜಿ ಪೊಟ್ಯಾಶ್ ಮಿಶ್ರಣದ ಗೊಬ್ಬರವನ್ನು ಸಾಲುಗಳಲ್ಲಿ ಚೆಲ್ಲಿ ಮಣ್ಣಿಗೆ ಬೆರೆಸ ಬೇಕು.ನಂತರ ತೆಳುವಾಗಿ ನೀರು ಕೊಟ್ಟು ಸಾಲಿನ ದಿಣ್ಣೆಯ ಮೇಲೆ ಬೀಜವನ್ನು ಊರಬೇಕು.ಪ್ರತಿ ಹೆಕ್ಟೇರ್ ಗೆ 35 ರಿಂದ 40 ಕೆ ಜಿ ಬೀಜಗಳು ಬೇಕಾಗುತ್ತದೆ.
ನಿರ್ವಹಣೆ :
ಬಿತ್ತಿದ 2 ವಾರಗಳ ನಂತರ ಅಂತರ ಬೇಸಾಯ ಮಾಡಿ ಕಳೆ ನಿರ್ಮೂಲನೆ ಮಾಡಿ.4 ವಾರಗಳ ನಂತರ ಸಸಿಗಳ ಬುಡಕ್ಕೆ ಮಣ್ಣು ಕೊಡಬೇಕು.ಉತ್ತಮ ಗುಣಮಟ್ಟದ ಕಾಯಿ ಮತ್ತು ಇಳುವರಿಗೆ ಕೋಲು ಮತ್ತು ಹುರಿಯನ್ನು ಮಾಡಿ ಬಳ್ಳಿಗೆ ಆಸರೆ ಕೊಡುವದು ಉತ್ತಮ.
ಮಣ್ಣಿನ ಗುಣ ಲಕ್ಷಣ ಮತ್ತು ವಾತಾವರಣಕ್ಕೆ ಅನುಗುಣವಾಗಿ ವಾರಕ್ಕೊಮ್ಮೆ ನೀರು ಕೊಡಬೇಕು.
ರೋಗಗಳು :
ಬೂದಿರೋಗ.ಕಾಯಿ ಕೊಳೆ.ತುಕ್ಕು ರೋಗ.ಕಾಂಡ ಕೊಳೆ.ಕಾಯಿ ಕೊರೆವ ಹುಳು.ಹೇನು.ಬೇರು ಕೊಳೆ .ತಙ್ನರ ಸಲಹೆ ಮೇರೆಗೆ ಕಾಲ ಕಾಲಕ್ಕೆ ತಗುಲುವ ರೋಗಗಳನ್ನ ನಿರ್ವಹಣೆ ಮಾಡುವದರಿಂದ ಉತ್ತಮ ಇಳುವರಿ ಸಾದ್ಯ.
ಕೊಯ್ಲು :
ನಾಟಿ ಮಾಡಿದ 45 ರಿಂದ 55 ದಿನಕ್ಕೆ ಹೂವಿಗೆ ಬರುವ ಗಿಡಗಳು ನಂತರದ ಎರಡು ವಾರದಲ್ಲಿ ಕಾಯಿಗಳನ್ನು ಕೊಯ್ಲು ಮಾಡಬಹುದು.ತಳಿಗಳಿಗೆ ಅನುಗುಣವಾಗಿ 70 ರಿಂದ 100 ದಿನದ ಅವದಿಯಲ್ಲಿ ಕೊಯ್ಲು ಪೂರ್ಣವಾಗುತ್ತದೆ.
ಇಳುವರಿ :
ಎಳೆ ಹಸಿರು ಕಾಯಿಯನ್ನು ತರಕಾರಿಯ ಸಲುವಾಗಿ ಕೀಳಬಹುದು.ಬಲಿತ ಕಾಯಿಗಳನ್ನು ಒಣಕಾಳುಗಳಾಗಿ ಕೀಳಬಹುದು.ತಳಿಗಳಿಗೆ ಅನುಗುಣವಾಗಿ ಪ್ರತಿ ಹೆಕ್ಟೇರ್ ಗೆ 60 ರಿಂದ 80 ಟನ್ ಇಳುವರಿ ಪಡೆಯಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ